IJFANS International Journal of Food and Nutritional Sciences

ISSN PRINT 2319-1775 Online 2320-7876

ಕನ್ನಡ ಮಹಿಳಾ ಕಾದಂಬರಿಗಳಲ್ಲಿ ಪಿತೃಪ್ರಾಧಾನ್ಯದ ನೆಲೆಗಳು

Main Article Content

Dr. Bharathidevi P

Abstract

ಆಧುನಿಕ ಕನ್ನಡ ಸಾಹಿತ್ಯ ರೂಪುಗೊಂಡದ್ದು ವಸಾಹತುಶಾಹಿಯ ಸಂದರ್ಭದಲ್ಲಿ. ಇದು ಒಂದು ಬಗೆಯ ಸಂಕ್ರಮಣ ಕಾಲ. ಈ ಹೊತ್ತಿನಲ್ಲಿ ಒಂದೆಡೆ ಪಾಶ್ಚಾತ್ಯ ಶಿಕ್ಷಣ ಪಡೆದು ಮುನ್ನಡೆಯುವ ಹಂಬಲವಿದ್ದರೆ ಇನ್ನೊಂದೆಡೆ ಪಾಶ್ಚಾತ್ಯರ ಆಕ್ರಮಣದ ಸಂದರ್ಭದಲ್ಲಿ ನಮ್ಮತನವನ್ನು ಕಳೆದುಕೊಳ್ಳಬಾರದು ಎಂಬ ಕೆಚ್ಚಿನೊಂದಿಗೆ ಪರಂಪರೆಯನ್ನು, ಸಂಪ್ರದಾಯವನ್ನು ಎತ್ತಿಹಿಡಿಯುವ ಬಗೆಯೂ ಕಾಣಿಸುತ್ತದೆ. ಈ ಕಾಲಘಟ್ಟದಲ್ಲಿದ್ದ ಆಧುನಿಕತೆ ಮತ್ತು ಪರಂಪರೆಗಳ ನಡುವಣ ಸಂಘರ್ಷ ಮತ್ತು ಅನುಸಂಧಾನ ಈ ಕಾಲದ ಬರವಣಿಗೆಗಳಲ್ಲೂ ಪ್ರತಿಫಲನಗೊಂಡಿರುವುದನ್ನು ನೋಡುತ್ತೇವೆ. ಮತ್ತು ಪಿತೃಪ್ರಾಧಾನ್ಯದ ಹೆಣಿಗೆಗಳು ಇವುಗಳ ಜೊತೆಗೆ ಬೆಸೆದುಕೊಂಡೇ ಇರುವುದನ್ನು ಕೂಡಾ ಗಮನಿಸಬಹುದು.

Article Details