ಕನ್ನಡ ಕಾವ್ಯಗಳಲ್ಲಿ ಮಾದರ ಚೆನ್ನಯ್ಯ
Abstract
12ನೇ ಶತಮಾನದ ಕಾಲಘಟ್ಟವನ್ನು ಅನುಲಕ್ಷಿಸಿದಾಗ ಕನ್ನಡ ಸಾಹಿತ್ಯದಲ್ಲಿ ಹೊಸ ಗುರುತಿಸಬಹುದಾಗಿದೆ. ಕೇವಲ ಅರಸೊತ್ತಿಗೆಗೆ ಸೀಮಿತವಾದ ಪಂಡಿತಮಾನ್ಯವಾದ ಸಾಹಿತ್ಯ ಒಂದಿತ್ತು. ನೆಲೆಯೊಂದನ್ನು ಈ ಜಾಡ್ಯವನ್ನು ಕಳಚಿಒ ಜನಸಾಮಾನ್ಯರನ್ನು ಲಕ್ಷಕ್ಕಿಕೊಂಡು ವಚನಾಕಾರರು ಯಾರದೇ ಮುಲಾಜು ಇಲ್ಲದೇ ಯಾವ ಕಟ್ಟುಪಾಡುಗಳಿಗೆ ಒಳಗಾಗದೆ ಸಮಾಜೋಧಾರ್ಮಿಕ ಚಳುವಳಿಯನ್ನು ಕೈಕೊಂಡು ಮನುಕುಲದ ಮನ ಮೈಲಿಗೆಯನ್ನು ತೊಳೆದು, ಜನಕಲ್ಯಾಣಕ್ಕಾಗಿ ಶರಣದರಿಂದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅರಮನೆಯಿಂದ, ಗುರು ಮನೆಯಿಂದ, ಗುಡಿಸಲಿನಿಂದ ಬಂದ ವಚನಕಾರರು, ಮನದ ಅಂತರಂಗವನ್ನು ತೊಳೆಯಲು ಶುದ್ಧ ಕಾಯಕ ನಿಷ್ಠೆ ಹಿನ್ನೆಲೆಯಲ್ಲಿ ವಚನಗಳನ್ನು ರಚಿಸಿದರು. ಅಂತಹ ವಚನಕಾರರಲ್ಲಿ ಮುಂಚೂಣಿಯಲ್ಲಿ ಬರುವ ಜೇಡರದಾಸಿಮಯ್ಯನಂತೆ ಮಾದರ ಚನ್ನಯ್ಯನು ಒಬ್ಬನು.





