ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ
Abstract
ವಚನ ಚಳುವಳಿ ನೇತಾರರಾದ ಮಹಾತ್ಮ ಬಸವಣ್ಣ ಕನ್ನಡ ನಾಡಿನ ವಚನ ಚಳುವಳಿಯ ಸಾಂಸ್ಕೃತಿ, ಸಾಹಿತ್ಯಕ ಶಕ್ತಿ ಕೂಡ. ವಿಶಿಷ್ಟಗಳಲ್ಲಿ ವೈಶಿಷ್ಟ್ಯತೆ ತುಂಬಿಕೊಂಡ ವಚನ ಸಾಹಿತ್ಯ ವಿಶ್ವಕ್ಕೆ ಸಾಹಿತ್ಯಕ, ಸಾಂಸ್ಕೃತಿಕ ಶ್ರೀಮಂತಿಕೆಯ ಮೌಲ್ಯವನ್ನು ಬಿಂಬಿಸಿದೆ. ಈ ಸಾಹಿತ್ಯಕ ಮತ್ತು ಸಾಂಸ್ಕೃತಿ ಕ್ಷೇತ್ರದ ರಾಯಭಾರಿ ಮಹಾತ್ಮ ಬಸವಣ್ಣ ಅವರ ಮುಂದಾಳತ್ವದಲ್ಲಿ ವಿಶ್ವವೇ ಕಂಡರಿಯದ ಮಾನವೀಯ ಮೌಲ್ಯಗಳ ವಿಸ್ಮಯ ನಡೆದಿರುವುದು. ಕನ್ನಡ ಸಾಹಿತ್ಯದ ಸಾಂಸ್ಕೃತಿಯ ಹೊಸ ಮಜಲು ಈ ಕಾಲಘಟ್ಟದಲ್ಲಿಯೇ ಬೆಳೆದು ಬಂದ ಸಂಗತಿ. ಈ ಕಾಲಘಟ್ಟದಲ್ಲಿ ನಡೆದ ಶಿವಶರಣರ ಚಳುವಳಿ ಸಾಮಾಜಿಕ ಮೌಲ್ಯಗಳನ್ನೊಳಗೊಂಡಿದೆ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಂಟಿಕೊಂಡು ಬಂದ ಜಾತಿ ಪದ್ಧತಿ ಮನುಷ್ಯರ ಸುಖ, ಸಂತೋಷ, ನೆಮ್ಮದಿಯ ಬದುಕಿನ ಬುಡಕ್ಕೆ ಬೆಂಕಿ ಹಚ್ಚಿದೆ. ಜಾತಿ, ಧರ್ಮದ ಹಿನ್ನೆಲೆಯಲ್ಲಿ ಶ್ರೇಷ್ಠ ಕನಿಷ್ಠವೆಂದು ದಿನನಿತ್ಯ ಬಡಿದಾಡಿ ಸಾಯುತ್ತಿವೆ.





