Volume 13 | Issue 4
Volume 13 | Issue 4
Volume 13 | Issue 4
Volume 13 | Issue 4
Volume 13 | Issue 4
ಕನ್ನಡ ನಾಡಿನಲ್ಲಿ ಕಾಯಕ ಸಂಸ್ಕೃತಿಯ ಮಹತ್ವ ತಿಳಿಸಿಕೊಟ್ಟವರು ಕಾಯಕದಿಂದ ಬದುಕು ನಡೆಸಿದ ಮಹಾನ್ ಪುರುಷರೆಂದರೆ ಬಸವಾದಿ ಶರಣರು. ಜೀವನದಲ್ಲಿ ಮಾಡುವ ಕಾಯಕ ಜೀವನಕ್ಕೆ ದಾರಿದೀಪ ತೋರಿಸುವಂಥದ್ದು. ಮಾಡುವ ಕಾಯಕದಲ್ಲಿ ಶ್ರೇಷ್ಠ, ಕನಿಷ್ಠ ಎಂದು ಕೀಳರಿಮೆ ಹೊಂದಿರಬಾರದು ನಾವು ಮಾಡುವ ಕೆಲಸ ಯಾವುದೇ ಇದ್ದರೂ ಅದು ಶ್ರೇಷ್ಠ. ಕಾಯಕದಲ್ಲಿ ನಿಷ್ಠೆ ಹೊಂದಿದ ಶರಣರು ಕೈಲಾಸವನ್ನು ಕಾಣಬಹುದು ಎಂದು ಶರಣರು ಹೇಳಿದ್ದಾರೆ. ಸಮಾಜ ಸುಧಾರಣೆಯಾಗಬೇಕಾದರೆ ಮೊದಲು ಕೆಲಸದಲ್ಲಿ ನಿರತರಾಗಬೇಕು ಮಾಡುವ ಕಾಯಕ ಒಳ್ಳೆಯ ಮಾರ್ಗ ಬಂದಿರಬೇಕು, ಕಾಯಕದಲ್ಲಿ ತನ್ನನ್ನು ತಾನು ಮರೆತುಕೊಳ್ಳುವಂತೆ ಇರಬೇಕು ಎಂದು ಹನ್ನೆರಡನೇ ಶತಮಾನದ ವಚನಕಾರರು ಸಾರಿ ಸಾರಿ ಹೇಳಿದ್ದಾರೆ. ಆಯ್ದಕ್ಕಿ ಲಕ್ಕಮ್ಮ ಎಂಬ ವಚನಕಾರತಿ ಹೀಗೆ ಹೇಳುತ್ತಾರೆ.